ನಿರ್ದೇಶಕರ ಡೆಸ್ಕ್

ನಿರ್ದೇಶಕರ:
ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ

ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಸುಂದರ ಆವರಣದಲ್ಲಿ ಸ್ಥಾಪಿತವಾಗಿರುವ, ಸರ್ಕಾರದಿಂದ ನಡೆಸಲ್ಪಡುವ ಸ್ವಾಯತ್ತ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು ಕರ್ನಾಟಕ ಸರ್ಕಾರವು 1984ರಲ್ಲಿ ಬಡ ಹಾಗೂ ಅಗತ್ಯವಿರುವ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಆರಂಭಿಸಿದೆ.

ಇದು ಟ್ರಾಮಾ ಮತ್ತು ಅಸ್ಥಿ ಚಿಕಿತ್ಸೆಯ ಕ್ಷೇತ್ರದಲ್ಲಿ ಉತ್ತಮವಾಗಿ ಸ್ಥಾಪಿತವಾದ ಕೇಂದ್ರವಾಗಿದ್ದು, ಕಡಿಮೆ ವೆಚ್ಚದಲ್ಲಿ ಮೊಣಕಾಲು ಮತ್ತು ಹಿಪ್‌ ಬದಲಾವಣೆ ಶಸ್ತ್ರಚಿಕಿತ್ಸೆಗಳನ್ನು ನಿಯಮಿತವಾಗಿ ನಡೆಸುತ್ತಿರುವ ಬೆಂಗಳೂರಿನ ಸರ್ಕಾರಿ ಕ್ಷೇತ್ರದ ಕೆಲವೇ ಆಸ್ಪತ್ರೆಗಳಲ್ಲೊಂದು ಆಗಿದೆ. ಇದರೊಂದಿಗೆ ಅಸ್ಥಿರೋಗ, ಸುರೂಪಿಕ ಶಸ್ತ್ರಚಿಕಿತ್ಸೆ, ಫೇಷಿಯೋಮ್ಯಾಕ್ಸಿಲರಿ ಶಸ್ತ್ರಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆ, ನರ ಶಸ್ತ್ರಚಿಕಿತ್ಸೆ, ಮೂತ್ರ ಶಸ್ತ್ರಚಿಕಿತ್ಸೆ ಮತ್ತು ಇತರೆ ಶಸ್ತ್ರಚಿಕಿತ್ಸೆಗಳನ್ನು ಸಹ ಇಲ್ಲಿ ನಡೆಸಲಾಗುತ್ತದೆ.

ವಿವಿಧ ಟ್ರಾಮ ಚಿಕಿತ್ಸೆಗಳು ಹಾಗೂ ಇತರೆ ಪ್ರಕರಣಗಳಿಗಾಗಿ ಸುರೂಪಿಕ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಫ್ರೀಫ್ಲ್ಯಾಪ್‌ಗಳು (ಮೈಕ್ರೋ ವ್ಯಾಸ್ಕ್ಯುಲರ್‌ ಶಸ್ತ್ರಚಿಕಿತ್ಸೆ) ನಡೆಸಲಾಗುತ್ತಿವೆ. ಎಲ್ಲಾ ವಿಶೇಷತೆಗಳಲ್ಲೂ ಪರಿಣತ ಹಾಗೂ ಅನುಭವ ಹೊಂದಿದ ವೈದ್ಯರ ತಂಡದೊಂದಿಗೆ ಉತ್ತಮ ಪ್ರಯೋಗಾಲಯ ಸೌಲಭ್ಯಗಳು ಮತ್ತು ಆಧುನಿಕ ರೇಡಿಯಾಲಜಿ ವಿಭಾಗವನ್ನು ಹೊಂದಿದ್ದು, ಟ್ರಾಮ ರೋಗಿಗಳಿಗೆ ಸಮಗ್ರ ಚಿಕಿತ್ಸೆ ನೀಡಲಾಗುತ್ತದೆ.

ಸರ್ಕಾರಿ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುವ ಅತ್ಯಾಧುನಿಕ ಕ್ರೀಡಾಗಾಯ ಕೇಂದ್ರ ಹಾಗೂ ಬೆನ್ನು ಮೂಳೆಯ ಗಾಯ ಕೇಂದ್ರವನ್ನು ನಮ್ಮ ಸಂಸ್ಥೆಯಲ್ಲಿ ಆರಂಭಿಸಲಾಗಿದೆ ಪ್ರಾರಂಭಿಸಿದ್ದೇವೆ. ಆಸ್ಪತ್ರೆಯನ್ನು ಸಂಪೂರ್ಣವಾಗಿ ಇ-ಆಸ್ಪತ್ರೆಯಾಗಿ ರೂಪಿಸುವ ಮೂಲಕ ಕಾಗದ ರಹಿತ ವ್ಯವಹಾರಗಳನ್ನು ಜಾರಿಗೆ ತರಲಾಗುತ್ತಿದೆ. ಆಸ್ಪತ್ರೆ ನಿರ್ವಹಣಾ ವ್ಯವಸ್ಥೆಯ ಭಾಗವಾಗಿ ಇ-ಮೊಬೈಲ್‌ ಸೇವೆಗಳನ್ನು ಪ್ರಾರಂಭಿಸುವ ಯೋಜನೆಯೂ ಇದೆ.

ಈ ಸಂಸ್ಥೆಗೆ ಎಂಎಸ್ ಅಸ್ಥಿ ಚಿಕಿತ್ಸಾ ವಿಭಾಗಕ್ಕೆ ಎಂಸಿಐ ಮಾನ್ಯತೆ ದೊರೆತಿರುವುದು ನಮಗೆ ಅಪಾರ ಸಂತೋಷವನ್ನು ನೀಡುತ್ತದೆ. ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ (SGITO)ಯನ್ನು ಟ್ರಾಮ ಹಾಗೂ ಅಸ್ಥಿ ಚಿಕಿತ್ಸಾ ರೋಗಿಗಳಿಗೆ ಸಮಗ್ರ ಚಿಕಿತ್ಸೆಯನ್ನು ಒಂದೇ ಸೂರಿನಡಿ ನೀಡುವ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ.

ನಮ್ಮ ಧ್ಯೇಯವಾಕ್ಯ – ಅತ್ಯಾಧುನಿಕ ತಂತ್ರಜ್ಞಾನ, ನಿರಂತರ ಸಂಶೋಧನೆ, ಗುಣಮಟ್ಟದ ಮತ್ತು ವೆಚ್ಚ ಪರಿಣಾಮಕಾರಿ ಸೇವೆಗಳ ಮೂಲಕ ಅತ್ಯುತ್ತಮ ಟ್ರಾಮ ಮತ್ತು ಅಸ್ಥಿ ಚಿಕಿತ್ಸೆಯನ್ನು ಒದಗಿಸುವ  ನಮ್ಮ ರೋಗಿಗಳ ಜೀವನವನ್ನು ಉತ್ತಮಗೊಳಿಸುವುದಕ್ಕೆ ನಾವು ಬದ್ಧರಾಗಿದ್ದೇವೆ.

ಈ ಸಂಸ್ಥೆಗೆ ನೀಡುವ ದೇಣಿಗೆಗಳಿಗೆ ಆದಾಯ ತೆರಿಗೆ ಕಾಯ್ದೆಯ 80G ಅಡಿಯಲ್ಲಿ ತೆರಿಗೆ ವಿನಾಯಿತಿ ಲಭ್ಯವಿದೆ.

“ಅತ್ಯಾಧುನಿಕ ತಂತ್ರಜ್ಞಾನ, ನಿರಂತರ ಸಂಶೋಧನೆ, ಗುಣಮಟ್ಟದ ಮತ್ತು ವೆಚ್ಚ ಪರಿಣಾಮಕಾರಿ ಸೇವೆಗಳ ಮೂಲಕ ಅತ್ಯುತ್ತಮ ಟ್ರಾಮ ಹಾಗೂ ಅಸ್ಥಿ ರೋಗ ಚಿಕಿತ್ಸೆಯನ್ನು ಒದಗಿಸಿ ನಮ್ಮ ರೋಗಿಗಳ ಜೀವನವನ್ನು ಬದಲಾಯಿಸಿ ಉತ್ತಮ ಗೊಳಿಸುವುದಕ್ಕೆ ನಾವು ಬದ್ಧರಾಗಿದ್ದೇವೆ.”