ಸಂಜಯಗಾಂಧಿ ಟ್ರಾಮಾ (ಆಘಾತ) ಮತ್ತು ಅಸ್ಥಿ ಚಿಕಿತ್ಸಾ ಕೇಂದ್ರವು ಬೆಂಗಳೂರು ನಗರದ ಹೃದಯ ಭಾಗದ ಆವರಣದಲ್ಲಿ ಸ್ಥಾಪಿತವಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಶೋಧನಾ ಕೇಂದ್ರವು ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದೆ. ಬಡವರು ಮತ್ತು ನಿರ್ಗತಿಕರ ವೈದ್ಯಕೀಯ ಅಗತ್ಯತೆಗಳನ್ನು ಪೂರೈಸಲು ೧೯೮೪ರಲ್ಲಿ ಟ್ರಾಮಾ ಮತ್ತು ಅಸ್ಥಿ ಕೇಂದ್ರವನ್ನು ಕರ್ನಾಟಕ ಸರಕಾರವು ಸ್ಥಾಪಿಸಿತ ಪ್ರತಿಷ್ಠಿತ ಸಂಸ್ಥೆಯಾಗಿರುತ್ತದೆ. ಸಾಮಾನ್ಯವಾಗಿ ಮೊಣಕಾಲು ಮತ್ತು ಚಪ್ಪೆ ಬದರಿ ಶಸ್ತ್ರಚಿಕಿತ್ಸೆ ಮತ್ತು ಅಸ್ಥಿಗೆ ಸಂಬಂಧಿಸಿದ ಮಾಮೂಲು ಶಸ್ತ್ರ ಚಿಕಿತ್ಸೆಗಳಾದ ಪ್ಲಾಸ್ಟಿಕ್ ಸರ್ಜರಿ, ಫೇಸಿಯೋ ಮಾಕ್ಸಿಲರಿ ಸರ್ಜರಿ, ಸಾಮಾನ್ಯ ಶಸ್ತ್ರ ಚಿಕಿತ್ಸೆ, ಮೂತ್ರ ಪಿಂಡ ಸಂಬಂಧಿತ ಹಾಗೂ ಇನ್ನಿತರ ಶಸ್ತ್ರಚಿಕಿತ್ಸೆಯನ್ನು ಜನಸಾಮಾನ್ಯರ ಕೈಗೆಟುಕುವ ದರಗಳಲ್ಲಿ ಮಾಡುವ ಕೆಲವೇ ಕೆಲವು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಇದೂ ಒಂದಾಗಿದೆ. ಫ್ರಿ ಫ್ಲಾಪ್ಸ್ (ಮೈಕ್ರೊ ಮಸ್ಕುಲರ್ ಸರ್ಜರಿ)ಯನ್ನು ಟ್ರಾಮಾ ಕೇರ್ ಮತ್ತು ಇನ್ನಿತರ ಸಂದರ್ಭಗಳಲ್ಲಿ ಪ್ಲಾಸ್ಟಿಕ್ ಸರ್ಜರಿ ವಿಭಾಗದಲ್ಲಿ ಕೈಗೊಳ್ಳಲಾಗುತ್ತದೆ. ಈ ಸಂಸ್ಥೆಯು ಟ್ರಾಮಾಗೆ ಸಂಬಂಧಿಸಿದ ಸಮಗ್ರ ಚಿಕಿತ್ಸೆಗೆ ನುರಿತ ಮತ್ತು ಅನುಭವಿ ತಜ್ಞ ವೈದ್ಯರ ತಂಡ, ಸುಸಜ್ಜಿತ ಪ್ರಯೋಗಾಲಯ ಸೌಲಭ್ಯ ಮತ್ತು ರೇಡಿಯೋಲಜಿ ವಿಭಾಗವನ್ನು ಹೊಂದಿರುತ್ತವೆ. ಕ್ರೀಡಾ ಗಾಯಗಳು ಮತ್ತು ಬೆನ್ನುಹುರಿ ಗಾಯಕ್ಕೆ ಸಂಬಂಧಿಸಿದಂತೆ, ನಾವು ಆಧುನಿಕ ಆವಿಷ್ಕಾರದ ವೈಜ್ಞಾನಿಕ ಪದ್ಧತಿಯನ್ನು ಸರಕಾರಿ ವಲಯದ ಆಸ್ಪತ್ರೆಯಲ್ಲಿ ಅಳವಡಿಸಿಕೊಂಡಿಟ್ಟು ವೈಶಿಷ್ಟ್ಯಪೂರ್ಣವಾಗಿರುತ್ತದೆ.
ನಾವು ನಮ್ಮ ಆಸ್ಪತ್ರೆಯ ವ್ಯವಹಾರಗಳನ್ನು ಕಾಗದರಹಿತಗೊಳಿಸಿ, ಇ-ಹಾಸ್ಪಿಟಲ್‌ಗೆ ಸಜ್ಜುಗೊಳಿಸುತ್ತಿದ್ದೇವೆ. ಜೊತೆಗೆ ಇ-ಮೊಬೈಲ್ ಸೇವೆಗಳನ್ನು ನಮ್ಮ ಆಸ್ಪತ್ರೆಯ ಕಾರ್ಯವಿಧಾನದಲ್ಲಿ ಅಳವಡಿಸಿಕೊಳ್ಳಲು ಪ್ರಾರಂಭಿಸುತ್ತಿದ್ದೇವೆ. ನಾವು ಭಾರತೀಯ ವೈದ್ಯಕೀಯ ಮಂಡಳಿಯಿಂದ ನಮ್ಮ ಸಂಸ್ಥೆಯಲ್ಲಿ ಸ್ನಾತಕೋತ್ತರ ಅಸ್ಥಿ ಶಸ್ತ್ರಚಿಕಿತ್ಸಾ ಕೋರ್ಸನ್ನು ಆರಂಭಿಸಲು ಅನುಮತಿ ಪಡೆದಿದ್ದೇವೆ ಎಂದು ತಿಳಿಸಲು ಹರ್ಷಿಸುತ್ತೇವೆ. ಹೀಗಾಗಿ ಟ್ರಾಮಾ ಮತ್ತು ಅಸ್ಥಿ ರೋಗಿಗಳ ಸಮಗ್ರ ಆರೈಕೆಯ ‘ಏಕ ನಿಲುಗಡೆ ಕೇಂದ್ರ’ವಾಗಿ ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ.
ನಮ್ಮ ಧ್ಯೇಯವಾಕ್ಯ
ಬದಲಾವಣೆಯನ್ನು ಅಳವಡಿಸಿಕೊಳ್ಳುತ್ತ, ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಪದ್ಧತಿಯಲ್ಲಿ ನಿರಂತರ ಸುಧಾರಣಾ ಪ್ರಕ್ರಿಯೆ, ಗುಣಮಟ್ಟ ಹಾಗೂ ವೆಚ್ಚ ಪರಿಣಾಮಕಾರಿ ಸೇವೆಯ ಮೂಲಕ ನಮ್ಮ ರೋಗಿಗಳ ಜೀವನ ಸ್ಥಿತಿಯನ್ನು ಸುಧಾರಿಸಲು ಕಟಿಬದ್ಧರಾಗಿದ್ದೇವೆ ಎಂಬುದು ನಮ್ಮ ಧ್ಯೇಯವಾಗಿರುತ್ತದೆ.
ಈ ಸಂಸ್ಥೆಗೆ ನೀಡುವ ದೇಣಿಗೆಯ ಆದಾಯ ತೆರಿಗೆ ೮೦ಉ ಅಡಿಯಲ್ಲಿ ತೆರಿಗೆ ಪಾವತಿಯಿಂದ ವಿನಾಯಿತಿಯನ್ನು ಪಡೆದಿರುತ್ತದೆ.
© Copyright 2024, All rights reserved. Sanjay Gandhi Institute of Trauma & Orthopaedics, Bengaluru, Karnataka, India